ಹಾಡು: ನೀನಾ ಭಗವಂತ
ಚಲನಚಿತ್ರ: ತ್ರಿವೇಣಿ
ಸಂಗೀತ ನಿರ್ದೇಶಕರು: ಉಪೇಂದ್ರ ಕುಮಾರ್
ಕವಿ: ಹಂಸಲೇಖ
ವರ್ಷ: 1973
ಹಾಡುಗಾರರು: ಜಿ.ಬಾಲಕೃಷ್ಣ, ಎಚ್.ಪಿ ಗೀತ
ಪಾತ್ರದಾರಿಗಳು: ಉದಯಕುಮಾರ್, ಕಲ್ಪನಾ
ಚಿತ್ರದ ನಿರ್ದೇಶಕರು: ಎಂ.ಎನ್.ಪ್ರಸಾದ್
ನಿರ್ಮಾಪಕರು: ನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್ (ಡಿ.ಜಿ. ನಾಗರಾಜ್)
ನೀನಾ ಭಗವಂತ ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೊ ಜಗದೋದ್ಧಾರಕ ನೀನೇನಾ
ನೀನೇನಾ ನೀನಾ ಭಗವಂತ ||ಪ||
ಗೋರ್ಕಲ್ಲಿಗೆ ಗುಡಿ ಮಂದಿರ ನೂರು
ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ
ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ ||೧||
ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸದರೂ ನೀ ಕಂಡಿಲ್ಲ
ನೀನಾ ಭಗವಂತ ||2||
ನಶ್ವರ ಭೋಗದ ಆಸೆ ಕಡಲಲಿ
ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ ||೩||
ಎಚ್.ಪಿ ಗೀತ : ಸಿರಿ ನಂದನ ಸಿರಿ ನಂದನ
ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೊ ಎನಗು ಜೀವನ
ಸಿರಿ ನಂದನ
ಜನನ ಮರಣ ಬಾಳ ಪಥದಿ
ಹರಿಸಿ ಸಾಗುವೆ ವಿನಾ
ಕರುಣೆ ಮಮತೆ ತೋರಿ ಇಹದೆ
ಸಲಹಿ ಕದಡುವೆ ಮನಾ
ಇರುವೆ ಎಲ್ಲಿ ಶೂನ್ಯ ಜಗದಿ
ಪ್ರಸರಿಸೊ ಶಾಂತನ
ಸಿರಿ ನಂದನ ||೪||
ಚಲನಚಿತ್ರ: ತ್ರಿವೇಣಿ
ಸಂಗೀತ ನಿರ್ದೇಶಕರು: ಉಪೇಂದ್ರ ಕುಮಾರ್
ಕವಿ: ಹಂಸಲೇಖ
ವರ್ಷ: 1973
ಹಾಡುಗಾರರು: ಜಿ.ಬಾಲಕೃಷ್ಣ, ಎಚ್.ಪಿ ಗೀತ
ಪಾತ್ರದಾರಿಗಳು: ಉದಯಕುಮಾರ್, ಕಲ್ಪನಾ
ಚಿತ್ರದ ನಿರ್ದೇಶಕರು: ಎಂ.ಎನ್.ಪ್ರಸಾದ್
ನಿರ್ಮಾಪಕರು: ನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್ (ಡಿ.ಜಿ. ನಾಗರಾಜ್)
ನೀನಾ ಭಗವಂತ ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೊ ಜಗದೋದ್ಧಾರಕ ನೀನೇನಾ
ನೀನೇನಾ ನೀನಾ ಭಗವಂತ ||ಪ||
ಗೋರ್ಕಲ್ಲಿಗೆ ಗುಡಿ ಮಂದಿರ ನೂರು
ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ
ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ ||೧||
ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸದರೂ ನೀ ಕಂಡಿಲ್ಲ
ನೀನಾ ಭಗವಂತ ||2||
ನಶ್ವರ ಭೋಗದ ಆಸೆ ಕಡಲಲಿ
ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ ||೩||
ಎಚ್.ಪಿ ಗೀತ : ಸಿರಿ ನಂದನ ಸಿರಿ ನಂದನ
ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೊ ಎನಗು ಜೀವನ
ಸಿರಿ ನಂದನ
ಜನನ ಮರಣ ಬಾಳ ಪಥದಿ
ಹರಿಸಿ ಸಾಗುವೆ ವಿನಾ
ಕರುಣೆ ಮಮತೆ ತೋರಿ ಇಹದೆ
ಸಲಹಿ ಕದಡುವೆ ಮನಾ
ಇರುವೆ ಎಲ್ಲಿ ಶೂನ್ಯ ಜಗದಿ
ಪ್ರಸರಿಸೊ ಶಾಂತನ
ಸಿರಿ ನಂದನ ||೪||
Labels: Neena Bhagavanta, Triveni, Upendra Kumar, Hamsalekha, 1973, Udayakumar, Kalpana, Narasimharaju
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ