ಶುಕ್ರವಾರ, ಜುಲೈ 4, 2014

ಒಂದೇ ರೂಪ ಎರಡು ಗುಣ : ಝಿಲ ಝಿಲನೆಂದು : Jhila Jhilanendu

ಹಾಡು: ಝಿಲ ಝಿಲನೆಂದು 
ಚಲನಚಿತ್ರ: ಒಂದೇ ರೂಪ ಎರಡು ಗುಣ
ಸಂಗೀತ ನಿರ್ದೇಶಕರು: ಸಲೀಲ್ ಚೌಧರಿ
ಕವಿ: ಕು.ರಾ. ಸೀತಾರಾಮ ಶಾಸ್ತ್ರಿ

ವರ್ಷ: 1975
ಹಾಡುಗಾರರು:  ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ

ಪಾತ್ರದಾರಿಗಳು: ವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಬಾಲಕೃಷ್ಣ, ಚಂದ್ರಶೇಖರ್, ಶಿವರಾಂ
ಚಿತ್ರದ ನಿರ್ದೇಶಕರು: ಎ. ಎಂ. ಸಮೀಉಲ್ಲಾ

ನಿರ್ಮಾಪಕರು: ಭವ ಮೂವೀಸ್ (ಎ. ಎಂ. ಸಮೀಉಲ್ಲಾ)


ಪಿ.ಸುಶೀಲ : ಝಿಲ ಝಿಲನೆಂದು ಚಲಿಸುತ ಮುಂದು 
ನದಿ ಇದು ಎಂದೂ ಹರಿಯುತಿದೆ ಎಲ್ಲಿಗೆ 
ಎಸ್.ಪಿ. : ಗಿರಿಯನು ಇಳಿದು ಬಯಲಲಿ ನಡೆದು 
ಇನಿಯನ ಅರಸಿ ಸಾಗರದ ಕಡೆಗೆ  ||ಪ||

ಪಿ.ಸುಶೀಲ: ನದಿಯಲ್ಲಿ ನೀರಾಡಿ ಓಡಿದೆ ತಂಗಾಗಳಿಯು ತಾನೆಲ್ಲಿಗೆ 
ಎಸ್.ಪಿ. : ಕರಿ ಮೋಡ ಬಾನಿಂದ ಭೂಮಿಗೆ ಬಿತ್ತೆನ್ನುತ ಬಂತಿಲ್ಲಿಗೆ 
ನಿನ್ನಯ ಕೂದಲಿನ ಈ ಮೋಡಿಗೆ ||೧||

ಪಿ.ಸುಶೀಲ: ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭುಮಿಗಿಂದು 
ಎಸ್.ಪಿ. : ನಡೆದು ನೀ ಬಂದಾಗ ಚೆಲುವೆ ನಿನ್ನೀ ಪಾದ ನೊಂದೀತೆಂದು 
ಹೂವಿನ ಹಾಸಿಗೆಯ ತಾ ಹಾಸಿದೆ ||೨||

ಪಿ.ಸುಶೀಲ: ಇರುಳಂತೆ ನಂಗೆಲ್ಲ ಬೆಳಕಿನ ಸ್ವರೂಪವು ತಾನೆನಂತೆ 
ಎಸ್.ಪಿ. : ಕಂಗಳಿಗೆ ಬೆಳಕು ರವಿ ಶಶಿ ಹೊಂದಾರೆಯು ದೀಪವಂತೆ 
ಹೃದಯಕೆ ಪ್ರೇಮವದೆ ಹೊಂಬೆಳಕು  ||೨||

Labels: Jhila Jhilanendu, Onde Rupa Eradu Guna, Salil Chowdhary, Ku.Ra. Seetarama Shastry, 1975, Vishnuvardhan, Chandrakala, Bhavani, Narasimharaju, Balakrishna, Chandrashekhar, Shivaram

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ