ಶುಕ್ರವಾರ, ಜುಲೈ 4, 2014

ಶಿವಸೈನ್ಯ : ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ : Chikkamagalura Chikka Mallige

ಹಾಡು: ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಚಲನಚಿತ್ರ: ಶಿವಸೈನ್ಯ
ಸಂಗೀತ ನಿರ್ದೇಶಕರು: ಇಳೆಯರಾಜ
ಕವಿ: 
ಶ್ಯಾಮಸುಂದರ್ ಕುಲಕರ್ಣಿ
ವರ್ಷ: 1996
ಹಾಡುಗಾರರು:  
ಇಳೆಯರಾಜ, ಚಿತ್ರಾ
ಪಾತ್ರದಾರಿಗಳು: ಶಿವರಾಜಕುಮಾರ್, ನಿವೇದಿತಾ ಜೈನ್, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಅರುಂಧತಿ ನಾಗ್, ಲೋಕನಾಥ್
ಚಿತ್ರದ ನಿರ್ದೇಶಕರು: ಶಿವಮಣಿ

ನಿರ್ಮಾಪಕರು: ಯಶಿ ಎಂಟರ್ಪ್ರೈಸಸ್ (ವೈ.ಎಸ್. ರಮೇಶ್)


ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಲಕ್ಕಿ ಈ ಲಕುಮಿಯೋ
ರಂಬೆ ಇವಳ ಮಮ್ಮಿಯೊ
ಕಣ್ಣಲ್ಲೆ ಹಾ ಹುಣ್ಣಿಮೆ ಬೆಳಕೊ

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ  ||ಪ||

ಕೋಲು ಕೋಳಣ್ಣ ಕೋಲೆ ಕೋಲೆ ಕೋಲೆ
ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೆ ಸಾಲೆ
ಸಾಲು ಓದುತ್ತ ಹೊಯ್ತು ವೇಳೆ ವೇಳೆ
ಸುವಿ ಸುವಿ ಸುವ್ವಾಲೆ, ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ, ತುಟಿ ತುಟಿಯಾಮೇಲೆ
ಗಂಗೆ ಆಕಾಶ ಗಂಗೆ, ಹಿಂಗೆ ಬೀಳುತ್ತ ನಂಗೆ
ಸೋನೆ ಸೋಬಾನೆ ಹಾಡಿತು ಉಯ್ಯಲಾಲ ||೧||

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕುಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ ||ಪ||

ಗಾಳಿ ತಂಗಾಳಿ ಬಂದು ಕಿವಿಗ್ಹೇಳಿತು
ಏನು ಏನೆಂದು ನಿನ್ನ ಮನ ಕೇಳಿತು
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡಿ ಪ್ರೇಮ ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ ಚೆಲ್ಲಿತ್ತು ಬಾನಿಂದ
ಪ್ರೇಮವೆಂಬ ಹೂ ಗಂಧ, ಜನ್ಮ ಜನ್ಮದಾ ಬಂಧ
ಕಣ್ಣ ಮುಚ್ಚಾಲೆಯಲ್ಲಿ ಕಂಡು ಕಂಡಿಲ್ಲ ಒಂದು
ಜೀವ ಜೀವದ ಸಂಗಮ ಭೂಮಿಯೆಲ್ಲ ||೨||

Labels: Chikkamagalura Chikka Mallige, Shivasainya, Ilayaraja, Shyamasundara Kulkarni, 1996, Shivarajkumar, Nivedita Jain, Mukhyamantri Chandru, Doddanna, Arundhati Nag, Lokanath

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ