ಹಾಡು: ಮಧುಮಾಸ ಚಂದ್ರಮಾ
ಚಲನಚಿತ್ರ: ವಿಜಯವಾಣಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್
ವರ್ಷ: 1976
ಹಾಡುಗಾರರು: ಎಸ್. ಜಾನಕಿ, ವಾಣಿ ಜಯರಾಂ
ಪಾತ್ರದಾರಿಗಳು: ಶ್ರೀನಾಥ್, ಕಲ್ಪನಾ, ಅಶೋಕ್, ಹೇಮಾಚೌಧರಿ, ದ್ವಾರಕೀಶ್
ಚಿತ್ರದ ನಿರ್ದೇಶಕರು: ಎನ್. ವೆಂಕಟೇಶ್
ನಿರ್ಮಾಪಕರು: ವಾಸುಕಿ ಫಿಲಂಸ್ (ರಾಜಾಶಂಕರ್)
Labels: Madhumasa Chandrama, Vijayavani, Rajan-Nagendra, Chi. Udayashankar, 1976, Srinath, Kalpana, Ashok, Hema Choudhari, Dwarakish
ಚಲನಚಿತ್ರ: ವಿಜಯವಾಣಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್
ವರ್ಷ: 1976
ಹಾಡುಗಾರರು: ಎಸ್. ಜಾನಕಿ, ವಾಣಿ ಜಯರಾಂ
ಪಾತ್ರದಾರಿಗಳು: ಶ್ರೀನಾಥ್, ಕಲ್ಪನಾ, ಅಶೋಕ್, ಹೇಮಾಚೌಧರಿ, ದ್ವಾರಕೀಶ್
ಚಿತ್ರದ ನಿರ್ದೇಶಕರು: ಎನ್. ವೆಂಕಟೇಶ್
ನಿರ್ಮಾಪಕರು: ವಾಸುಕಿ ಫಿಲಂಸ್ (ರಾಜಾಶಂಕರ್)
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ||ಪ||
ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೆ
ಅಲೆಯಲ್ಲಿ ತೇಲಿ ತೇಲಿದೆ ||೧||
ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನಾ ತೂಗುವೆ
ಹಾಯಾಗಿ ತೂಗಿ ಕೂಗುವೆ ||೨||
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ||ಪ||
ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೆ
ಅಲೆಯಲ್ಲಿ ತೇಲಿ ತೇಲಿದೆ ||೧||
ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನಾ ತೂಗುವೆ
ಹಾಯಾಗಿ ತೂಗಿ ಕೂಗುವೆ ||೨||
Labels: Madhumasa Chandrama, Vijayavani, Rajan-Nagendra, Chi. Udayashankar, 1976, Srinath, Kalpana, Ashok, Hema Choudhari, Dwarakish
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ