ಶುಕ್ರವಾರ, ಜುಲೈ 4, 2014

ಶಿವಸೈನ್ಯ : ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ : Chikkamagalura Chikka Mallige

ಹಾಡು: ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಚಲನಚಿತ್ರ: ಶಿವಸೈನ್ಯ
ಸಂಗೀತ ನಿರ್ದೇಶಕರು: ಇಳೆಯರಾಜ
ಕವಿ: 
ಶ್ಯಾಮಸುಂದರ್ ಕುಲಕರ್ಣಿ
ವರ್ಷ: 1996
ಹಾಡುಗಾರರು:  
ಇಳೆಯರಾಜ, ಚಿತ್ರಾ
ಪಾತ್ರದಾರಿಗಳು: ಶಿವರಾಜಕುಮಾರ್, ನಿವೇದಿತಾ ಜೈನ್, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಅರುಂಧತಿ ನಾಗ್, ಲೋಕನಾಥ್
ಚಿತ್ರದ ನಿರ್ದೇಶಕರು: ಶಿವಮಣಿ

ನಿರ್ಮಾಪಕರು: ಯಶಿ ಎಂಟರ್ಪ್ರೈಸಸ್ (ವೈ.ಎಸ್. ರಮೇಶ್)


ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಲಕ್ಕಿ ಈ ಲಕುಮಿಯೋ
ರಂಬೆ ಇವಳ ಮಮ್ಮಿಯೊ
ಕಣ್ಣಲ್ಲೆ ಹಾ ಹುಣ್ಣಿಮೆ ಬೆಳಕೊ

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ  ||ಪ||

ಕೋಲು ಕೋಳಣ್ಣ ಕೋಲೆ ಕೋಲೆ ಕೋಲೆ
ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೆ ಸಾಲೆ
ಸಾಲು ಓದುತ್ತ ಹೊಯ್ತು ವೇಳೆ ವೇಳೆ
ಸುವಿ ಸುವಿ ಸುವ್ವಾಲೆ, ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ, ತುಟಿ ತುಟಿಯಾಮೇಲೆ
ಗಂಗೆ ಆಕಾಶ ಗಂಗೆ, ಹಿಂಗೆ ಬೀಳುತ್ತ ನಂಗೆ
ಸೋನೆ ಸೋಬಾನೆ ಹಾಡಿತು ಉಯ್ಯಲಾಲ ||೧||

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕುಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ ||ಪ||

ಗಾಳಿ ತಂಗಾಳಿ ಬಂದು ಕಿವಿಗ್ಹೇಳಿತು
ಏನು ಏನೆಂದು ನಿನ್ನ ಮನ ಕೇಳಿತು
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡಿ ಪ್ರೇಮ ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ ಚೆಲ್ಲಿತ್ತು ಬಾನಿಂದ
ಪ್ರೇಮವೆಂಬ ಹೂ ಗಂಧ, ಜನ್ಮ ಜನ್ಮದಾ ಬಂಧ
ಕಣ್ಣ ಮುಚ್ಚಾಲೆಯಲ್ಲಿ ಕಂಡು ಕಂಡಿಲ್ಲ ಒಂದು
ಜೀವ ಜೀವದ ಸಂಗಮ ಭೂಮಿಯೆಲ್ಲ ||೨||

Labels: Chikkamagalura Chikka Mallige, Shivasainya, Ilayaraja, Shyamasundara Kulkarni, 1996, Shivarajkumar, Nivedita Jain, Mukhyamantri Chandru, Doddanna, Arundhati Nag, Lokanath

ಒಂದೇ ರೂಪ ಎರಡು ಗುಣ : ಝಿಲ ಝಿಲನೆಂದು : Jhila Jhilanendu

ಹಾಡು: ಝಿಲ ಝಿಲನೆಂದು 
ಚಲನಚಿತ್ರ: ಒಂದೇ ರೂಪ ಎರಡು ಗುಣ
ಸಂಗೀತ ನಿರ್ದೇಶಕರು: ಸಲೀಲ್ ಚೌಧರಿ
ಕವಿ: ಕು.ರಾ. ಸೀತಾರಾಮ ಶಾಸ್ತ್ರಿ

ವರ್ಷ: 1975
ಹಾಡುಗಾರರು:  ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ

ಪಾತ್ರದಾರಿಗಳು: ವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಬಾಲಕೃಷ್ಣ, ಚಂದ್ರಶೇಖರ್, ಶಿವರಾಂ
ಚಿತ್ರದ ನಿರ್ದೇಶಕರು: ಎ. ಎಂ. ಸಮೀಉಲ್ಲಾ

ನಿರ್ಮಾಪಕರು: ಭವ ಮೂವೀಸ್ (ಎ. ಎಂ. ಸಮೀಉಲ್ಲಾ)


ಪಿ.ಸುಶೀಲ : ಝಿಲ ಝಿಲನೆಂದು ಚಲಿಸುತ ಮುಂದು 
ನದಿ ಇದು ಎಂದೂ ಹರಿಯುತಿದೆ ಎಲ್ಲಿಗೆ 
ಎಸ್.ಪಿ. : ಗಿರಿಯನು ಇಳಿದು ಬಯಲಲಿ ನಡೆದು 
ಇನಿಯನ ಅರಸಿ ಸಾಗರದ ಕಡೆಗೆ  ||ಪ||

ಪಿ.ಸುಶೀಲ: ನದಿಯಲ್ಲಿ ನೀರಾಡಿ ಓಡಿದೆ ತಂಗಾಗಳಿಯು ತಾನೆಲ್ಲಿಗೆ 
ಎಸ್.ಪಿ. : ಕರಿ ಮೋಡ ಬಾನಿಂದ ಭೂಮಿಗೆ ಬಿತ್ತೆನ್ನುತ ಬಂತಿಲ್ಲಿಗೆ 
ನಿನ್ನಯ ಕೂದಲಿನ ಈ ಮೋಡಿಗೆ ||೧||

ಪಿ.ಸುಶೀಲ: ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭುಮಿಗಿಂದು 
ಎಸ್.ಪಿ. : ನಡೆದು ನೀ ಬಂದಾಗ ಚೆಲುವೆ ನಿನ್ನೀ ಪಾದ ನೊಂದೀತೆಂದು 
ಹೂವಿನ ಹಾಸಿಗೆಯ ತಾ ಹಾಸಿದೆ ||೨||

ಪಿ.ಸುಶೀಲ: ಇರುಳಂತೆ ನಂಗೆಲ್ಲ ಬೆಳಕಿನ ಸ್ವರೂಪವು ತಾನೆನಂತೆ 
ಎಸ್.ಪಿ. : ಕಂಗಳಿಗೆ ಬೆಳಕು ರವಿ ಶಶಿ ಹೊಂದಾರೆಯು ದೀಪವಂತೆ 
ಹೃದಯಕೆ ಪ್ರೇಮವದೆ ಹೊಂಬೆಳಕು  ||೨||

Labels: Jhila Jhilanendu, Onde Rupa Eradu Guna, Salil Chowdhary, Ku.Ra. Seetarama Shastry, 1975, Vishnuvardhan, Chandrakala, Bhavani, Narasimharaju, Balakrishna, Chandrashekhar, Shivaram

ಮಾವನ ಮಗಳು : ನಾನೇ ವೀಣೆ ನೀನೇ ತಂತಿ : Naane Veene Neene Tanti

ಹಾಡು: ನಾನೇ ವೀಣೆ ನೀನೇ ತಂತಿ
ಚಲನಚಿತ್ರ: ಮಾವನ ಮಗಳು
ಸಂಗೀತ ನಿರ್ದೇಶಕರು: ಟಿ. ಚಲಪತಿ ರಾವ್
ಕವಿ: ಕುವೆಂಪು

ವರ್ಷ: 1965
ಹಾಡುಗಾರರು: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಜಯಲಲಿತಾ, ನರಸಿಂಹರಾಜು, ರಂಗ
ಚಿತ್ರದ ನಿರ್ದೇಶಕರು: ಎಸ್. ಕೆ. ಎ. ಚಾರಿ

ನಿರ್ಮಾಪಕರು: ಪಿ.ಎ.ಪಿ. (ಎ.ವಿ. ಸುಬ್ಬರಾವ್)

ನಾನೇ ವೀಣೆ ನೀನೇ ತಂತಿ 
ಅವನೇ ವೈಣಿಕ ||ಪ||

ಮಿಡಿದನೆನಲು ರಸದ ಹೊನಲು 
ಬಿಂದು ಬಿಂದು ಸೇರಿಸಿಂತು 
ನಾದ ರೂಪ ತಾ ||೧||

ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ವೀಣಾ 
ಕಲ್ಲಿಜೇನ ಸೊಗದಸ್ನಾನ ಅಮೃತಪಾನ ||೨||

Labels: Naane Veene Neene Tanti, Mavana Magalu, T. Chalapati Rao, KuVemPu,  1965, Kalyan Kumar, Jayalalita, Narasimha Raju, Ranga

ಮಿಸ್ ಲೀಲಾವತಿ : ದೋಣಿ ಸಾಗಲಿ ಮುಂದೆ ಹೋಗಲಿ : Doni Sagali Munde Hogali

ಹಾಡು: ದೋಣಿ ಸಾಗಲಿ ಮುಂದೆ ಹೋಗಲಿ 
ಚಲನಚಿತ್ರ: ಮಿಸ್ ಲೀಲಾವತಿ 
ಸಂಗೀತ ನಿರ್ದೇಶಕರು: ಆರ್. ಸುದರ್ಶನಂ
ಕವಿ: ಕುವೆಂಪು

ವರ್ಷ: 1965
ಹಾಡುಗಾರರು: ಎಸ್. ಜಾನಕಿ, ರಾಮಚಂದ್ರ ರಾವ್
ಪಾತ್ರದಾರಿಗಳು: ಜಯಂತಿ, ರಮೇಶ್, ಅಶ್ವಥ್, ನರಸಿಂಹರಾಜು
ಚಿತ್ರದ ನಿರ್ದೇಶಕರು: ಎಂ. ಆರ್. ವಿಠಲ್

ನಿರ್ಮಾಪಕರು: ಕಲಾಜ್ಯೋತಿ

ದೋಣಿ ಸಾಗಲಿ ಮುಂದೆ ಹೋಗಲಿ 
ದೂರ ತೀರವ ಸೇರಲಿ 
ಬೀಸು ಗಾಳಿಗೆ ಬೀಳುತೇಳುವ 
ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ 
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ 
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ 
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧|| 

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ 
ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ 
ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ 
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ ||೨|| 

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ 
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ 
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ 
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

Labels: Doni Sagali Munde Hogali, Miss Leelavati, R. Sudarshanam, KuVemPu,  1965, Jayanti, Ramesh, Ashwath, Narasimha Raju

ಒಂದೇ ರೂಪ ಎರಡು ಗುಣ : ಓ ಉಡಾಳಾ ಸಡಾಳಾ : O Udala Sadala

ಹಾಡು: ಓ ಉಡಾಳಾ ಸಡಾಳಾ  
ಚಲನಚಿತ್ರ: ಒಂದೇ ರೂಪ ಎರಡು ಗುಣ
ಸಂಗೀತ ನಿರ್ದೇಶಕರು: ಸಲೀಲ್ ಚೌಧರಿ
ಕವಿ: ಕು.ರಾ. ಸೀತಾರಾಮ ಶಾಸ್ತ್ರಿ

ವರ್ಷ: 1975
ಹಾಡುಗಾರರು: ಎಸ್. ಜಾನಕಿ, ಮೋಹನ್

ಪಾತ್ರದಾರಿಗಳು: ವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಬಾಲಕೃಷ್ಣ, ಚಂದ್ರಶೇಖರ್, ಶಿವರಾಂ
ಚಿತ್ರದ ನಿರ್ದೇಶಕರು: ಎ. ಎಂ. ಸಮೀಉಲ್ಲಾ

ನಿರ್ಮಾಪಕರು: ಭವ ಮೂವೀಸ್ (ಎ. ಎಂ. ಸಮೀಉಲ್ಲಾ)

ಓ ಉಡಾಳಾ ಸಡಾಳಾ 
ಆಡಿಸಿ ಕಾಡಿಸಿ ಕೆಂಗೆಡಿಸಿ ಭ್ರಮೀಸಿ ಶ್ರಮೀಸಿ 
ಮೈ ಕೈ ಸೋಕಿಸಿ ರಮೀಸಿ ಕದ್ದೆಯಾ ನನ್ನೆದೆಯಾ ||ಪ||

ಸಪೂರಾ ಮನಸನು ದೋಚಿದ ಚೋರ 
ಅಪಾರಾ ಮೋಡಿಯ ಹೂಡಿದಿ ಪೋರ
ನೀ ತೋಳನಂತೆ ಹಾರಿದರೆ ಕುಣಿಯ ಬಡಿಯೆ ನಾನು 
ಗಂಟಲೊಣಗಿ ಸೊಂಟ ನಡುಗಿ ತುಂಟ ನಿನ್ನ ಚೇಷ್ಟೆಗೆ 
ಅದರಿ ಬೆದರಿದೆ ||೧||

ಮೋಹನ್: ಇದೆಲ್ಲಾ ಏರಿ ಬಂದ ಯೌವನ್ನದ ಸೊಂಪು 
ಅದೇಕೆ ಮುಪ್ಪಿನೆದೆಗು ತಪ್ಪದಂತ ಕಂಪು 
ಬರಿ ಒಣ ಚಪಲದಿಂದ ಏನೂ ಸಾಗದು 
ಹುಣಿಸೆ ಮರಕೆ ಮುಪ್ಪು ಬಂದರೇನು ಹುಳಿಯು ಹೋಗದು 
ತಕಿಟ ದಿಕಿಟ ತೋಂ  ||೨||

Labels: O Udala Sadala, Onde Rupa Eradu Guna, Salil Chowdhary, Ku.Ra. Seetarama Shastry, 1975, Vishnuvardhan, Chandrakala, Bhavani, Narasimharaju, Balakrishna, Chandrashekhar, Shivaram

ಒಂದು ಹೆಣ್ಣಿನ ಕಥೆ : ಸಾಗರಕೆ ಚಂದಿರ ತಂದ : Sagarake Chandira Tanda

ಹಾಡು: ಸಾಗರಕೆ ಚಂದಿರ ತಂದ 
ಚಲನಚಿತ್ರ: ಒಂದು ಹೆಣ್ಣಿನ ಕಥೆ
ಸಂಗೀತ ನಿರ್ದೇಶಕರು: ಟಿ.ಜಿ. ಲಿಂಗಪ್ಪ
ಕವಿ: ಆರ್.ಎನ್. ಜಯಗೋಪಾಲ್

ವರ್ಷ: 1972
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಪಾತ್ರದಾರಿಗಳು: ರಾಜೇಶ್, ಜಯಂತಿ, ರಾಜಮ್ಮ, ಬಿ.ವಿ. ರಾಧಾ, ಸುದರ್ಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು

ನಿರ್ಮಾಪಕರು: ಪದ್ಮಿನಿ ಪಿಚ್ಚರ್ಸ್ (ಬಿ.ಆರ್. ಪಂತುಲು)

ಎಸ್.ಪಿ. : ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಜಾನಕಿ: ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ ||ಪ||

ಎಸ್.ಪಿ. : ಬೆಳ್ಳಿತಾರೆ ತೋರಣ ನೀ ತಂದ ಸ್ತ್ರೀಧನ
ಅರಳಿನಿಂತ ಹೂ ಬನ ನೀ ನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ ||೧||

ಜಾನಕಿ: ಹೃದಯ ತಂತಿ ತಾನ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ ಒಲವಿನ ಸಂಧಾನ ||೨||

Labels: Sagarake Chandira Tanda, Ondu Hennina Kathe, T.G. Lingappa, R.N. Jayagopal, 1972, Rajesh, Jayanti, Rajamma, Sudarshan, B.V. Radha

ಅಪರಾಧಿ : ನಗುವ ನಿನ್ನ ಮೊಗದ ಚೆನ್ನ : Naguva Ninna Mogada Chenna

ಹಾಡು: ನಗುವ ನಿನ್ನ ಮೊಗದ ಚೆನ್ನ 
ಚಲನಚಿತ್ರ: ಅಪರಾಧಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: 
ಚಿ. ಉದಯಶಂಕರ್
ವರ್ಷ: 1976
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ
ಪಾತ್ರದಾರಿಗಳು: ಶ್ರೀನಾಥ್, ಆರತಿ, ಬಾಲಕೃಷ್ಣ
ಚಿತ್ರದ ನಿರ್ದೇಶಕರು: ವೈ.ಆರ್. ಸ್ವಾಮಿ

ನಿರ್ಮಾಪಕರು: ಓಂ ಶಕ್ತಿ ಕ್ರಿಯೇಷನ್ಸ್ (ಎಸ್. ಹೀರಾ)

ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ 
ಹೆಣ್ಣು: ಮಾತಲೆ ನನ್ನ ಮೈ ಚೆಲುವನ್ನ ಹೊಗಳದೆ ಚೆನ್ನ ಬಾರೊ 
ಗಂಡು: ನಗುವ ನಿನ್ನ ಮೊಗದ ಚೆನ್ನ ಒಲವನು ಕೋರಿದೆ ||ಪ||

ಗಂಡು: ಸ್ನೇಹಕೆ ಮನಸಿಂದು ಸೋಲುತಿದೆ 
ಆಸೆಯು ನನ್ನನೆ ತೇಲಿಸಿದೆ 
ಏಕೊ ಏನೊ ಎಲ್ಲ ಹೊಸದಾಗಿದೆ ||೧||

ಹೆಣ್ಣು: ಹೊಳೆಯುವ ಕಣ್ಣಾಸೆ ಕೇಳಿದೆಯ 
ಹವಳದ ತುಟಿಗಾಸೆ ಬಾ ಇನಿಯ
ಯಾರು ಇಲ್ಲ ಇಲ್ಲಿ ನೀ ಕಾಣೆಯ ||೨||

ಗಂಡು: ಕೆಣಕುವ ಮಾತಿಂದ ಕಾಡಿರುವೆ 
ಸರಸಕೆ ಬಾ ಎಂದು ಕೂಗಿರುವೆ
ಇನ್ನು ನನ್ನ ಆಟ ನೀ ನೋಡುವೆ  ||೩||

Labels: Naguva Ninna Mogada Chenna, Aparadhi, Satyam, Chi. Udayashankar, 1976, Srinath, Arati, Balakrishna