ಹಾಡು: ನೀ ನುಡಿಯದಿರಲೇನು
ಚಲನಚಿತ್ರ: ಮರಳಿ ಗೂಡಿಗೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಕೆ.ಎಸ್. ನಿಸಾರ್ ಅಹ್ಮದ್
ವರ್ಷ: 1984
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಪೂರ್ಣಿಮಾ, ರೂಪಾದೇವಿ
ಚಿತ್ರದ ನಿರ್ದೇಶಕರು: ಶಾಂತಾರಾಮ್
ನಿರ್ಮಾಪಕರು: ಶ್ರೀ ಗುರುಶರಣಂ ಫಿಲಂಸ್ (ಬಾಲಾಜಿ)
Labels: Nee Nudiyadiralenu, Marali Gudige, Rajan-Nagendra, K.S. Nisar Ahmed, 1984, Kalyan Kumar, Poornima, Roopadevi
ಚಲನಚಿತ್ರ: ಮರಳಿ ಗೂಡಿಗೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಕೆ.ಎಸ್. ನಿಸಾರ್ ಅಹ್ಮದ್
ವರ್ಷ: 1984
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಪೂರ್ಣಿಮಾ, ರೂಪಾದೇವಿ
ಚಿತ್ರದ ನಿರ್ದೇಶಕರು: ಶಾಂತಾರಾಮ್
ನಿರ್ಮಾಪಕರು: ಶ್ರೀ ಗುರುಶರಣಂ ಫಿಲಂಸ್ (ಬಾಲಾಜಿ)
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ ||ಪ||
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ
ನಿನ್ನ ಸಿರಿವಂತಿಕೆಯ ಕಾಣುವಾಸೆ
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ
ಚೆಲುಗನಸಿನಿರುಳುಗಳ ಹುಡುಕುವಾಸೆ ||೧||
ಅರೆ ಗಳಿಗೆ ಸುಖಸ್ವಪ್ನ ಬರಲಾರದೆನ್ನೊಡನೆ
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು
ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು ಹಿಡಿಯಬಹುದು ||೨||
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ ||ಪ||
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ
ನಿನ್ನ ಸಿರಿವಂತಿಕೆಯ ಕಾಣುವಾಸೆ
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ
ಚೆಲುಗನಸಿನಿರುಳುಗಳ ಹುಡುಕುವಾಸೆ ||೧||
ಅರೆ ಗಳಿಗೆ ಸುಖಸ್ವಪ್ನ ಬರಲಾರದೆನ್ನೊಡನೆ
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು
ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು ಹಿಡಿಯಬಹುದು ||೨||
Labels: Nee Nudiyadiralenu, Marali Gudige, Rajan-Nagendra, K.S. Nisar Ahmed, 1984, Kalyan Kumar, Poornima, Roopadevi
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ