ವಿಜಯನಾರಸಿಂಹ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಜಯನಾರಸಿಂಹ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ಅನುರಾಗ ಬಂಧನ : ನಿನ್ನ ಸವಿನೆನಪೆ : Ninna Savi Nenape

ಹಾಡು: ನಿನ್ನ ಸವಿನೆನಪೆ
ಚಲನಚಿತ್ರ: ಅನುರಾಗ ಬಂಧನ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ವಿಜಯನಾರಸಿಂಹ
ವರ್ಷ: 1978
ಹಾಡುಗಾರರು: ಎಸ್. ಜಾನಕಿ

ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಆರತಿ, ಕಲ್ಪನಾ, ವಸಂತ ಕುಮಾರ್ ಪಾಟೀಲ್
ಚಿತ್ರದ ನಿರ್ದೇಶಕರು: ಗೀತಪ್ರಿಯ

ನಿರ್ಮಾಪಕರು: ಬಿ.ಪಿ. ಫಿಲಂಸ್

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ 
ಪ್ರೀತಿಯ ಸವಿಮಾತೆ ಉಪಾಸನೆ 
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು 
ಶೃಂಗಾರ ರಸಧಾರೆ ಹುಯಿಲಾಯಿತು ||ಪ||

ಹೂಬಾಣ ಹೂಡಲು ಕಾಮನಬಿಲ್ಲು 
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು 
ಉಸಿರಾಟ ನೀನು ಬಿಸಿ ಮಿಡುಕಾಟ ನಾನು 
ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ 
ನೀ ತಂದೆ ರಸಕಾವ್ಯ ಸವಿ ಮುನ್ನುಡಿ 
ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು 
ನಿನ್ನ ವಿನಾ ನಾ ಬಾಳೆನು 
ಇನ್ನು ದಯೆ ಬಾರದೇನು 
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ 
ಬಾಳಲಿ ಬೆಳಕಾಗು ಮಹೇಶ್ವರ 
ನಮ್ಮ ಕೈಹಿಡಿದು ಕಾಪಾಡು ಕರುಣಾಕರ 
ನನ್ನಲ್ಲಿ ದಯೆಮಾಡು ಶಿವಶಂಕರ ||೨||

Labels: Ninna Savi Nenape, Anuraga Bandhana, Rajan-Nagendra, Vijaya Narasimha, 1978, Kalyan Kumar, Arati, Kalpana, Vasant Kumar Patil

ಕಾಂಚನ ಮೃಗ : ಹೂ ಬನದಲೀ : Hu Banadali

ಹಾಡು: ಹೂ ಬನದಲೀ
ಚಲನಚಿತ್ರ: ಕಾಂಚನ ಮೃಗ 
ಸಂಗೀತ ನಿರ್ದೇಶಕರು: ಅಶ್ವಥ್-ವೈದಿ
ಕವಿ: 
ವಿಜಯನಾರಸಿಂಹ
ವರ್ಷ: 1981
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪಾತ್ರದಾರಿಗಳು:
ಚಿತ್ರದ ನಿರ್ದೇಶಕರು: 

ನಿರ್ಮಾಪಕರು: 


ಹೂ ಬನದಲೀ ನಗುವು ಸುಮದಲೀ
ಪ್ರೀತೀ ಹಾಡಲೀ ತಾನ ಮೂಡಲೀ ||ಪ||

ಶೃಂಗಾರ ಕಾವ್ಯ ಭಾವ ಮೈತಾಳಿ ಬಂದಿತೋ
ಸಂಗೀತ ರಾಗ ಲಾಸ್ಯ ಈ ಜೀವ ತುಂಬಿತೋ
ಮಧು ಋತುವು ನಗು ನಗುತ ಲಾವಣ್ಯ ತಂದಿತೋ
ಈ ಚೆಲುವ ಈ ಒಲವ ಕವಿ ಹಾಡು ಕಂಡಿತೋ ||೧||

ಹೂ ಮಂಚದಲ್ಲಿ ಅಂದ ಆನಂದ ತೂಗಿತೋ
ರೋಮಾಂಚದಲ್ಲಿ ಕಾಲ ಇಲ್ಲೇನೆ ನಿಂತಿತೋ
ಮಧುಲತೆಯು ವಧುವಾಗಿ ಸೌಂದರ್ಯ ಹೊಮ್ಮಿತೋ
ಮಧಿರೆಯದು ನಯನದಲಿ ರತಿಯಂತೆ ಬಂದಿತೋ  ||೨||

Labels: Hu Banadali, Kanchana Mriga, Ashwath-Vaidi, Vijaya Narasimha,  1981

ಕಾಂಚನ ಮೃಗ : ಈ ಸವಿದಿನ : Ee Savidina

ಹಾಡು: ಈ ಸವಿದಿನ
ಚಲನಚಿತ್ರ: ಕಾಂಚನ ಮೃಗ 
ಸಂಗೀತ ನಿರ್ದೇಶಕರು: ಅಶ್ವಥ್-ವೈದಿ
ಕವಿ: 
ವಿಜಯನಾರಸಿಂಹ
ವರ್ಷ: 1981
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಪಾತ್ರದಾರಿಗಳು:
ಚಿತ್ರದ ನಿರ್ದೇಶಕರು: 

ನಿರ್ಮಾಪಕರು: 

ಈ ಸವಿದಿನ ಎಂದೆಂದು ಮರೆಯೆ ನಾ 
ಒಲವಿನ ಸ್ಪಂದನ ಎಂಥ ಬಂಧನ ||ಪ||

ಗಂಡು: ಹೊಸ ಹರೆಯ ಬಿಸಿ ಬಯಕೆ ಹೊಸಿಲ ಮೇಲಿದೆ 
ನಸು ನಗೆಯ ನವ ಭಾವ ನಮದೆ ಆಗಿದೆ 
ಕನಸು ನಿನ್ನೆಗೆ ನನಸು ಇಂದಿಗೆ ||೧||

ಹೆಣ್ಣು: ಸರಸಮಯ ರಸ ನಿಮಿಷ ಹರುಷ ತುಂಬಿದೆ 
ಮೃದು ಮನದ ಅನುರಾಗ ಬೆಸುಗೆ ತಂದಿದೆ 
ಸುಖದ ಸ್ನೇಹಕೆ ಸುಧೆಯ ಕಾಣಿಕೆ ||೨||

Labels: Ee Savidina, Kanchana Mriga, Ashwath-Vaidi, Vijaya Narasimha,  1981