ರಾಜನ್-ನಾಗೇಂದ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜನ್-ನಾಗೇಂದ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ಮಹಾತ್ಯಾಗ : ಈ ಬಾಳಗೀತೆಗೆ ಎಂದೂ : Ee Balageetege Endu

ಹಾಡು: ಈ ಬಾಳಗೀತೆಗೆ ಎಂದೂ
ಚಲನಚಿತ್ರ: ಮಹಾತ್ಯಾಗ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಆರ್.ಎನ್. ಜಯಗೋಪಾಲ್

ವರ್ಷ: 1974
ಹಾಡುಗಾರರು: 
ಎಸ್. ಜಾನಕಿ, ರಾಮಕೃಷ್ಣ
ಪಾತ್ರದಾರಿಗಳು: ಆರತಿ, ನಂದಕಿಶೋರ್, ಲೀಲಾವತಿ, ವಿಜಯಕಲಾ
ಚಿತ್ರದ ನಿರ್ದೇಶಕರು: ಮಾರುತಿ ಶಿವರಾಂ

ನಿರ್ಮಾಪಕರು: ಮಾರುತಿ ಫಿಲಂಸ್ (ಎಂ.ಎಸ್.ಅರ್. ಸ್ವಾಮಿ)

ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನೂ 
ಶೃತಿಯಲ್ಲಿ ನಾದವಾಗೀ ಬೆರೆತುಹೋದೆ ನಾನೂ ||ಪ||

ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ 
ಬದುಕೆಂಬ ಬಾನಿನಲ್ಲಿ ಹೊಂಗಿರಣ ತಂದೆ
ಈ ಪ್ರೇಮದ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ ಆ ಕ್ಷಣದಂದೆ ||೧||

ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು ಜೊತೆ ನಾನೆಂದು ಜೀವನದಲ್ಲಿ  ||೨||

Labels: Ee Balageetege Endu, Mahatyaga, Rajan-Nagendra, R.N. Jayagopal, 1974, Arati, Nandakishore, Leelavati, Vijayakala

ಮರಳಿ ಗೂಡಿಗೆ : ನೀ ನುಡಿಯದಿರಲೇನು : Nee Nudiyadiralenu

ಹಾಡು: ನೀ ನುಡಿಯದಿರಲೇನು 
ಚಲನಚಿತ್ರ: ಮರಳಿ ಗೂಡಿಗೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಕೆ.ಎಸ್. ನಿಸಾರ್ ಅಹ್ಮದ್

ವರ್ಷ: 1984
ಹಾಡುಗಾರರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಪೂರ್ಣಿಮಾ, ರೂಪಾದೇವಿ
ಚಿತ್ರದ ನಿರ್ದೇಶಕರು: ಶಾಂತಾರಾಮ್

ನಿರ್ಮಾಪಕರು: ಶ್ರೀ ಗುರುಶರಣಂ ಫಿಲಂಸ್ (ಬಾಲಾಜಿ)


ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 
ಕಣ್ಣಂಚಿನ ಕೊನೆಯ ಭಾವದಲ್ಲಿ
ಬಗೆ ನೋವ ಭಾರಕ್ಕೆ ಬಳಲಿರುವ ಮೊಗವಿಹುದು 
ಕಾರ್ಮೋಡದಾಗಸದ ರೀತಿಯಲ್ಲಿ ||ಪ||

ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯ ಕಾಣುವಾಸೆ 
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ 
ಚೆಲುಗನಸಿನಿರುಳುಗಳ ಹುಡುಕುವಾಸೆ ||೧|| 

ಅರೆ ಗಳಿಗೆ ಸುಖಸ್ವಪ್ನ ಬರಲಾರದೆನ್ನೊಡನೆ 
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು 
ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು ಹಿಡಿಯಬಹುದು  ||೨||

Labels: Nee Nudiyadiralenu, Marali Gudige, Rajan-Nagendra, K.S. Nisar Ahmed, 1984, Kalyan Kumar, Poornima, Roopadevi

ಅನುರಾಗ ಬಂಧನ : ನಿನ್ನ ಸವಿನೆನಪೆ : Ninna Savi Nenape

ಹಾಡು: ನಿನ್ನ ಸವಿನೆನಪೆ
ಚಲನಚಿತ್ರ: ಅನುರಾಗ ಬಂಧನ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ವಿಜಯನಾರಸಿಂಹ
ವರ್ಷ: 1978
ಹಾಡುಗಾರರು: ಎಸ್. ಜಾನಕಿ

ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಆರತಿ, ಕಲ್ಪನಾ, ವಸಂತ ಕುಮಾರ್ ಪಾಟೀಲ್
ಚಿತ್ರದ ನಿರ್ದೇಶಕರು: ಗೀತಪ್ರಿಯ

ನಿರ್ಮಾಪಕರು: ಬಿ.ಪಿ. ಫಿಲಂಸ್

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ 
ಪ್ರೀತಿಯ ಸವಿಮಾತೆ ಉಪಾಸನೆ 
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು 
ಶೃಂಗಾರ ರಸಧಾರೆ ಹುಯಿಲಾಯಿತು ||ಪ||

ಹೂಬಾಣ ಹೂಡಲು ಕಾಮನಬಿಲ್ಲು 
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು 
ಉಸಿರಾಟ ನೀನು ಬಿಸಿ ಮಿಡುಕಾಟ ನಾನು 
ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ 
ನೀ ತಂದೆ ರಸಕಾವ್ಯ ಸವಿ ಮುನ್ನುಡಿ 
ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು 
ನಿನ್ನ ವಿನಾ ನಾ ಬಾಳೆನು 
ಇನ್ನು ದಯೆ ಬಾರದೇನು 
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ 
ಬಾಳಲಿ ಬೆಳಕಾಗು ಮಹೇಶ್ವರ 
ನಮ್ಮ ಕೈಹಿಡಿದು ಕಾಪಾಡು ಕರುಣಾಕರ 
ನನ್ನಲ್ಲಿ ದಯೆಮಾಡು ಶಿವಶಂಕರ ||೨||

Labels: Ninna Savi Nenape, Anuraga Bandhana, Rajan-Nagendra, Vijaya Narasimha, 1978, Kalyan Kumar, Arati, Kalpana, Vasant Kumar Patil

ವಿಜಯವಾಣಿ : ಮಧುಮಾಸ ಚಂದ್ರಮಾ : Madhumasa Chandrama

ಹಾಡು: ಮಧುಮಾಸ ಚಂದ್ರಮಾ
ಚಲನಚಿತ್ರ: ವಿಜಯವಾಣಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್

ವರ್ಷ: 1976
ಹಾಡುಗಾರರು: ಎಸ್. ಜಾನಕಿ, ವಾಣಿ ಜಯರಾಂ

ಪಾತ್ರದಾರಿಗಳು: ಶ್ರೀನಾಥ್, ಕಲ್ಪನಾ, ಅಶೋಕ್, ಹೇಮಾಚೌಧರಿ, ದ್ವಾರಕೀಶ್
ಚಿತ್ರದ ನಿರ್ದೇಶಕರು: ಎನ್. ವೆಂಕಟೇಶ್

ನಿರ್ಮಾಪಕರು: ವಾಸುಕಿ ಫಿಲಂಸ್ (ರಾಜಾಶಂಕರ್)


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ 
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ||ಪ||

ನಾ ಪ್ರೇಮದರಮನೆಯಲ್ಲಿ ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೆ 
ಅಲೆಯಲ್ಲಿ ತೇಲಿ ತೇಲಿದೆ ||೧||

ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಬೆರೆವೆ 
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನಾ ತೂಗುವೆ
ಹಾಯಾಗಿ ತೂಗಿ ಕೂಗುವೆ ||೨||

Labels: Madhumasa Chandrama, Vijayavani, Rajan-Nagendra, Chi. Udayashankar, 1976, Srinath, Kalpana, Ashok, Hema Choudhari, Dwarakish