ದೊಡ್ಡರಂಗೇಗೌಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೊಡ್ಡರಂಗೇಗೌಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ಅವಳಿ ಜವಳಿ : ಸರಸದ ಈ ಪ್ರತಿನಿಮಿಷ : Sarasada Ee Prati Nimisha

ಹಾಡು: ಸರಸದ ಈ ಪ್ರತಿನಿಮಿಷ 
ಚಲನಚಿತ್ರ: ಅವಳಿ ಜವಳಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: ದೊಡ್ಡರಂಗೇಗೌಡ

ವರ್ಷ: 1981
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಪಾತ್ರದಾರಿಗಳು: ಶ್ರೀನಾಥ್, ಮಂಜುಳಾ, ರೇಖಾರಾವ್
ಚಿತ್ರದ ನಿರ್ದೇಶಕರು: ಎ.ವಿ. ಶೇಷಗಿರಿರಾವ್

ನಿರ್ಮಾಪಕರು: ಮೋಹನಮುರಳಿ ಪ್ರೊಡಕ್ಷನ್ಸ್ (ಪಿ. ಕೃಷ್ಣರಾಜ್)


ಸರಸದ ಈ ಪ್ರತಿನಿಮಿಷ 
ಸ್ವರಸ್ವರವೂ ನವಮೋಹನ ರಾಗ ||ಪ||

ಎಸ್.ಜಾನಕಿ: ಬರೆದವರಾರು ಒಲವಿನ ಕಾವ್ಯ 
ಮಿಲನವೊ ವಿರಹವೊ ಎಲ್ಲವು ನವ್ಯ 
ಎಸ್.ಪಿ. : ಚೆಲುವಿನ ಪೂಜೆ ದಿನದಿನ ಭವ್ಯ 
ಪ್ರಣಯವೊ ವಿರಸವೊ ಎಲ್ಲವು ದಿವ್ಯ 
ಇಬ್ಬರೂ : ಶೃತಿಶೃತಿಯ ಗತಿಯಲ್ಲಿ ಈ ಮೋಹನರಾಗ ||೧||

ಎಸ್.ಜಾನಕಿ: ಮನಸಿನ ಭಾವ ಮಧುಮಯವಾಗಿ 
ನಲಿವಲಿ ನಗುತಿರೆ ಬಾರದು ಹೀಗೆ 
ಎಸ್.ಪಿ. : ಬೆಸುಗೆಯ ತಂದ ಪ್ರಣಯಮ ಬಂಧ 
ಮಧುರವೊ ಮಧುರವೊ ಎಲ್ಲವು ಅಂಧ 
ಇಬ್ಬರೂ : ತುಟಿತುಟಿಯೆ ಸುಧೆಯುಂತೆ ಈ ಮೋಹನರಾಗ  ||೨||

Labels: Sarasada Ee Prati Nimisha, Avali Javali, Satyam, Doddarangegowda, 1981, Srinath, Manjula, Rekha Rao

ಅವಳಿ ಜವಳಿ : ರೋಮಾಂಚನ ನಲ್ಮೆ ಜೀವನ : Romanchana Nalme Jivana

ಹಾಡು: ರೋಮಾಂಚನ ನಲ್ಮೆ ಜೀವನ 
ಚಲನಚಿತ್ರ: ಅವಳಿ ಜವಳಿ
ಸಂಗೀತ ನಿರ್ದೇಶಕರು: ಸತ್ಯಂ
ಕವಿ: ದೊಡ್ಡರಂಗೇಗೌಡ

ವರ್ಷ: 1981
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ
ಪಾತ್ರದಾರಿಗಳು: ಶ್ರೀನಾಥ್, ಮಂಜುಳಾ, ರೇಖಾರಾವ್
ಚಿತ್ರದ ನಿರ್ದೇಶಕರು: ಎ.ವಿ. ಶೇಷಗಿರಿರಾವ್

ನಿರ್ಮಾಪಕರು: ಮೋಹನಮುರಳಿ ಪ್ರೊಡಕ್ಷನ್ಸ್ (ಪಿ. ಕೃಷ್ಣರಾಜ್)


ರೋಮಾಂಚನ ನಲ್ಮೆ ಜೀವನ 
ಅನುರಾಗದ ವೀಣ ನುಡಿಸಿದೆ ಗಾನ 
ಕ್ಷಣಕ್ಷಣ ಒಲವಿನ ಧ್ಯಾನ ||ಪ||

ಪಿ.ಸುಶೀಲಾ : ಪ್ರಣಯದ ತಾಣ ಸರಸದ ತ್ರಾಣ 
ತನುಮನ ಭಾವನೆ ಹೊಂಗಿರಣ 
ಎಸ್.ಪಿ. : ತುಟಿಗಳ ಪಾನ ಸುರತದ ಜೇನ 
ದಿನದಿನ ಕಾಮನೆ ಸಿಹಿ ಚುಂಬನ 
ಪಿ.ಸುಶೀಲಾ : ಮಿನುಗುತ ನಾಟಿದೆ ಮದನನ ಬಾಣ 
ಎಸ್.ಪಿ. : ಮಿನುಗುತ ನಾಟಿದೆ ಮದನನ ಬಾಣ ||೧||

ಎಸ್.ಪಿ. : ಹೃದಯದ ಗಾನ ತುಡಿದಿದೆ ಪ್ರಾಣ 
ಬಯಕೆಯ ಬಾಳಿನ ಸವಿ ನಂದನ 
ಪಿ.ಸುಶೀಲಾ : ಮಿಲನದ ಮೌನ ಅರಿತರೆ ಜಾಣ 
ಕಣಕಣ ಪ್ರೇರಣೆ ಸಿಹಿ ಚೇತನ 
ಎಸ್.ಪಿ. : ಮುಗಿಯದೆ ಸಾಗಿದೆ ಮಧುಮಯ ಯಾನ 
ಪಿ.ಸುಶೀಲಾ : ಮುಗಿಯದೆ ಸಾಗಿದೆ ಮಧುಮಯ ಯಾನ  ||೨||

Labels: Romanchana Nalme Jivana, Avali Javali, Satyam, Doddarangegowda, 1981, Srinath, Manjula, Rekha Rao